Saturday, July 1, 2023
Published in www.sallapa.com for 28th June 2023
ವಸಂತ ಹೊಸಬೆಟ್ಟು
ವಸಂತ ಹೊಸಬೆಟ್ಟು ಅವರು ವ್ಯಂಗ್ಯಚಿತ್ರಕಾರರಾಗಿ ಅಂತರರಾಷ್ಟ್ರೀಯ ಮಟ್ಟದ ಸಾಧನೆಗಳಿಂದ ಮತ್ತು ಬರಹಗಾರರಾಗಿ ಹೆಸರಾಗಿದ್ದಾರೆ.
ವಸಂತ ಹೊಸಬೆಟ್ಟು ಅವರು 1965ರ ಜೂನ್ 28ರಂದು ಉಡುಪಿಯಲ್ಲಿ ಜನಿಸಿದರು. ಬಿ.ಎಸ್ಸಿ ಪದವಿ ಪಡೆದ ಅವರು ಪತ್ರಿಕೋದ್ಯಮದಲ್ಲಿ ಮತ್ತು ಮ್ಯಾನೇಜ್ಮೆಂಟ್ ವಿಷಯಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿಗಳನ್ನೂ ಗಳಿಸಿದ್ದಾರೆ.
ವಸಂತ ಹೊಸಬೆಟ್ಟು ಅವರು ವೃತ್ತಿಯಲ್ಲಿ ಸಂಪತ್ತು, ವಿಮೆ, ಮಾಧ್ಯಮಗಳಲ್ಲಿ ಸಲಹೆಗಾರರಾಗಿದ್ದಾರೆ. ಪ್ರವೃತ್ತಿಯಲ್ಲಿ ವ್ಯಂಗ್ಯಚಿತ್ರ ಮತ್ತು ಬರಹಗಳನ್ನು ರೂಢಿಸಿಕೊಂಡಿದ್ದಾರೆ.
ವಸಂತ ಹೊಸಬೆಟ್ಟು ಅವರ ಮೊದಲ ವ್ಯಂಗ್ಯಚಿತ್ರ 1987ರಲ್ಲಿ ಮುಂಗಾರು ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಮುಂದೆ ಅವರ ವ್ಯಂಗ್ಯಚಿತ್ರಗಳು ಮತ್ತು ಬರಹಗಳು ನಿರಂತರ ಪ್ರವಹಿಸುತ್ತ ಬಂದಿವೆ.
ವಸಂತ ಹೊಸಬೆಟ್ಟು ಅವರ ಮಹತ್ಸಾಧನೆಗಳಲ್ಲಿ "Longest Running Cartoon Column in Newspaper” ಗಾಗಿ World Records Universityಯಿಂದ ಗೌರವ ಡಾಕ್ಟರೇಟು, ಲಿಮ್ಕಾ ದಾಖಲೆ, ವಿಶ್ವ ದಾಖಲೆ, 5th prize in the Second Taejon International Cartoon Contest 1993, South Korea ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಮನ್ನಣೆಗಳು ಸೇರಿವೆ.
ವಸಂತ ಹೊಸಬೆಟ್ಟು ಅವರ ಮರೆಯಲಾಗದ ಅನುಭವಗಳಲ್ಲಿ 28 ದಿನದ ಅಮೆರಿಕಾದ PUERTORICOನಲ್ಲಿನ, 11 ದಿನ ವಂಗ್ಯಚಿತ್ರ ರಾಜಧಾನಿ ಫ್ರಾನ್ಸ್ ನ St just Martelನಲ್ಲಿನ, 4 ದಿನ ವಿಯೆಟ್ನಾಮ್ ನ ಹೋಚಿಮಿನ್ ನಗರದಲ್ಲಿನ, 11 ದಿನದ ಕೊಲ್ಲಿ ರಾಷ್ಟ್ರಗಳಾದ ಓಮನ್ ಮತ್ತು ಯುಎಇ ಗಳಲ್ಲಿನ ವಾಸ್ತವ್ಯಗಳು ಮತ್ತು ವಿಶ್ವದ ಇತರೆಡೆಗಳಲ್ಲಿನ ಅನುಭವಗಳು ಸೇರಿವೆ. ಅವರ ಈ ಕುರಿತ ಅನುಭವಗಳು ಸಚಿತ್ರ ಬರಹಗಳಾಗಿಯೂ ನಿಯತಕಾಲಿಕಗಳಲ್ಲಿ ಮೂಡಿಬಂದಿವೆ. ಅವರ ಕಲಾತ್ಮಕ ಅಭಿವ್ಯಕ್ತಿಗಳು ಅವರ http://hosabettutoons.blogspot.com ಮತ್ತು ಸೋಷಿಯಲ್ ಮೀಡಿಯಾಗಳಲ್ಲಿಯೂ ಖ್ಯಾತಿಗೊಂಡಿವೆ.
ಕಮ್ಮಟವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ವಸಂತ ಹೊಸಬೆಟ್ಟು ಅವರು ಆಪ್ತವಾಗಿ ಮೂಡಿಸಿದ ನಮ್ಮ ಹಲವು ಗೆಳೆಯರ ಹರಟೆ ಕಟ್ಟೆಗೆ ನೀಡಿದ ಚಿತ್ರರೂಪ ಮತ್ತು ಅವರ ಆಪ್ತ ಸ್ನೇಹಭಾವ ಸದಾ ನನ್ನ ನೆನಪಿನಲ್ಲಿದೆ.
ಆತ್ಮೀಯ ಪ್ರತಿಭಾನ್ವಿತ ಸಾಧಕರಾದ ವಸಂತ ಹೊಸಬೆಟ್ಟು ಅವರಿಗೆ ಹುಟ್ಟು ಹಬ್ಬದ ಶುಭಹಾರೈಕೆಗಳು.
(ನಮ್ಮ ಕನ್ನಡ ಸಂಪದ Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
Subscribe to:
Posts (Atom)
-
C.V of Vasantha Hosabettu Personal Information: Address: Flat No. 122, 2nd Block Jan...